ಹಳಚಿ ಮುರಿದುದು ವೀರ ಕರ್ಣನ ಬಲ ಕೃಪಾಚಾರಿಯರ ಸೇನೆಗೆ ತಲೆಯ ಋಣ ಸಂಬಂಧ ಸವೆದುದು ಕಾತರಿಸಿ ಕವಿವ ಬಲದ ಬಿರುದರಿಗಮರ ನಾರಿಯ ರೊಳಗೆ ಸೇರುವೆಯಾಯ್ತು ಶಲ್ಯನ ಬಲದಡಗು ಸವಿಯಾಯ್ತು ಜಂಬುಕ ಕಾಕ ಸಂತತಿಗೆ ೫
ಕೆಡೆದ ರಥ ಸಲೆ ಕಾಂಚನಾದ್ರಿಯ ನಡಸಿದವು ನಾಚಿಕೆಯನಭ್ರದೊ ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ ಕಡಲುವರಿವರುಣಾಂಬು ಜಲಧಿಗೆ ಬಿಡಿಸಿದವು ಬಿಂಕವನು ಶಿವ ಶಿವ ನುಡಿವ ಕವಿ ಯಾರಿನ್ನು ಪಾರ್ಥ ಕುಮಾರನಾಹವವ ೬
ಪಡೆಯ ತೆಗೆ ತರುವಲಿಯ ಕೊಲ್ಲದೆ ಹಿಡಿಯೆನುತ ಬಿರುಸರಳ ತಿರುವಿನ ಲಡಸಿ ಸೂತರಿಗರುಹಿ ಕೆಲಬಲದವರ ಕೈವೀಸಿ ಕಡುಮನದ ಕೈಚಳಕಿಗರು ಮುಂ ಗುಡಿಯಲೈತರೆ ರವಿಸುತಾದಿಗ ಳೊಡನೊಡನೆ ಕೈಕೊಂಡರಿಂದ್ರಕುಮಾರ ನಂದನನ ೭
ಶಿಶುತನದ ಸಾಮರ್ಥ್ಯ ಸಾಕಿ ನ್ನೆಸದಿರೆಲವೋ ಮರಳು ಮರಳೆಂ ದಸಮ ಬಲರೈದಿದರು ಷಡುರಥರೊಂದು ಮುಖವಾಗಿ ಎಸುಗೆ ನಿಮಗೆಂದಾಯ್ತು ನಿದ್ರೆಯ ಮುಸುಕಿನಲಿ ಗೋಗ್ರಹಣದಲಿ ಜೀ ವಿಸಿದ ಜಾಣರು ನೀವೆನುತ್ತಿದಿರಾದನಭಿಮನ್ಯು ೮
ತರಳತನದಲಿ ನುಡಿಯದಿರು ಸಂ ಗರಕೆ ಕರೆ ನಿಮ್ಮಯ್ಯನನು ಹೊಸ ಸರಳು ನಾಚುವವಲ್ಲ ಶಿಶುವಧೆಯೆಂಬುದಪವಾದ ಮರಳುವುದು ಲೇಸೆನುತ ಷಡುರಥ ರುರವಣಿಸಿದರು ಬಿಗಿದಬಿಲ್ಲಿನ ಗರುಡಿಕಾರನ ಕೂಡ ನೂಕಿತು ರವಿಸುತಾದಿಗಳು ೯
ಪಾರ್ಥ ಪರಿಯಂತೇಕೆ ಸಮರ ವ್ಯರ್ಥಜೀವರು ನೀವು ಕೌರವ ನರ್ಥವನು ಸಲೆ ತಿಂಬುದಲ್ಲದೆ ಸಮರ ನಿಮಗೇಕೆ ಸ್ವಾರ್ಥ ಲೋಲುಪ್ತಿಯಲಿ ನಿಲುವ ಸ ಮರ್ಥರಾದರೆ ಬಾಣ ಧಾರಾ ತೀರ್ಥದೊಳಗೋಲಾಡಿಸುವೆನೆಂದೆಚ್ಚನಭಿಮನ್ಯು ೧೦
ಮಸಗಿ ಮದದಾನೆಗಳು ಸಿಂಹದ ಶಿಶುವ ಮುತ್ತುವವೋಲು ಕವಿಕವಿ ದೆಸುತ ಬಂದರು ಮಕುಟವರ್ಧನರಸಮಬಾಲಕನ ನುಸುಳದವರವರಸ್ತ್ರವನು ಖಂ ಡಿಸುತ ಸನ್ನಾಹದಲಿ ಘನ ಪೌ ರುಷದಲೆಚ್ಚಾಡಿದನು ಹಲಬರ ಕೂಡೆ ಸುಕುಮಾರ ೧೨
ಕೋಡಿದನೆ ಕೊಂಕಿದನೆ ನಾಯಕ ವಾಡಿಗಳು ಹಲರೆಂದು ಬೆಂಗೊ ಟ್ಟೋಡಿದನೆ ಕೈಗಾಯದೆಚ್ಚನು ನಚ್ಚಿದಂಬಿನಲಿ ತೋಡು ಬೀಡಿನ ಹವಣನಾತನ ಮಾಡಿದಾತನೆ ಬಲ್ಲನೆನೆ ಕೈ ಮಾಡಿ ಸುರಿದನು ಸರಳ ಮಳೆಯ ಮಹಾರಥರ ಮೇಲೆ ೧೩
ವಿನಯವೇಕಿದು ನಿಮ್ಮ ಭುಜಬಲ ದನುವ ಬಲ್ಲೆನು ನಿಮ್ಮ ಕೈ ಮೈ ತನದ ಹವಣನು ಕಾಬೆನೆನ್ನೊಳು ಸೆಣಸಿ ಜಯಿಸಿದರೆ ಧನುವ ಹಿಡಿಯೆನು ಸಾಕು ಡೊಂಬನ ಬಿನುಗು ನುಡಿಯಂತಿರಲಿ ಬಲ್ಲಡೆ ಮೊನೆಗಣೆಯಲೇ ಮಾತನಾಡೆಂದೆಚ್ಚನಭಿಮನ್ಯು ೧೫
ಎಡದೊಳೌಕುವ ಕೃಪನನೆಚ್ಚನು ತಡೆಯಲಶ್ವತ್ಥಾಮನನು ರಥ ಕೆಡೆಯಲೆಚ್ಚನು ತೊಡಚಿ ಕೈಯಲಿ ಕೌರವಾನುಜನ ಮಿಡುಕಲೆಚ್ಚನು ಹಿಂದು ಮುಂದವ ಗಡಿಸಿದಾ ಮಾದ್ರೇಯ ರವಿಸುತ ರೊಡಲೊಳಂಬನು ಹೂಳಿದನು ಸೀಳಿದನು ಸಮರಥರ ೧೬
ಹೂಸಕದ ಶೌರಿಯದ ಬಾಳಿಕೆ ಯೇಸು ದಿನವೈ ಕರ್ಣ ಕೃಪ ದು ಶ್ಶಾಸನರ ಕೊಂಬನೆ ಕುಮಾರಕ ಸುರರಿಗಲಿಗಣಸು ಘಾಸಿಯಾದರು ಘಾಯವಡೆದು ವಿ ಳಾಸವಳಿದುದು ರಿಪುಭಟನ ಗೆಲು ವಾಸೆ ಬೀತುದು ಧಾತುಗೆಟ್ಟುದು ಸರಳ ಸಾರದಲಿ ೨೦
ವಿರಥನಾದನು ಕರ್ಣನಂಬಿಗೆ ತಿರುಹಿ ಬಿಲ್ಲನು ತೊಟ್ಟನಾ ಗುರು ಗುರುತನೂಜನು ತನ್ನ ಸೂತನ ಶಿರವ ಹರಿಯೆಚ್ಚ ಸುರಗಿಯನು ಬಿಸುಟೊರೆಯ ತಿರುಹಿದ ನರಸನನುಜನು ಕೃಪನು ಶಲ್ಯನು ಕೊರಳಲಸುಗಳ ಹಿಡಿದು ಹಂಗಿಗರಾದರೊಡೆಯಂಗೆ ೨೧
ಗನ್ನದಲಿ ಗುರು ಜಾರಿದನು ಕೃಪ ಮುನ್ನವೇ ಹಿಂಗಿದನು ಕರ್ಣನ ನಿನ್ನು ಕಂಡವರಾರು ಮೂರ್ಛೆಗೆ ಮೂರು ಬಾರಿಯದು ಬೆನ್ನ ತೆತ್ತರು ಬಿರುದರಾತಗೆ ಕೆನ್ನೆಯೆಡೆಗುಗಿದಂಬು ಸಹಿತವೆ ನಿನ್ನ ಮಗನರನೆಲೆಗೆ ಸರಿದನು ಭೂಪ ಕೇಳೆಂದ ೨೨
ಏನು ಬ೦ದೆಯಪೂರ್ವವೆನೆ ಯಾ ಗಾನುರಾಗವನರುಪಲತಿ ಸು ಮ್ಮಾನದಲಿ ಶಿಶುಪಾಲ ಹೇರಿಸಿದನು ಮಹಾಧನವ ಮಾನಿಸರ ಕಳುಹಿದರೆ ಸಾಲದೆ ನೀನಿದೇಕೆ೦ದುಚಿತದಲಿ ಸ ನ್ಮಾನಿಸುತ ನಿಲಿಸಿದನು ತಿ೦ಗಳು ಪವನನ೦ದನನ ೩
ನಡೆದು ಮು೦ದೆ ಕಳಿ೦ಗ ದೇಶ ದೊ ಳಡಸಿ ಬಿಟ್ಟನು ಶೋಣಿವ೦ತನ ಹಿಡಿದು ಕಪ್ಪವ ಕೊ೦ಡು ಸದೆದನು ಕೋಸಲೇಶ್ವರನ ಅಡಕಿತಲ್ಲಿಯ ಧನ ಪಯೋಧಿಯ ಕಡೆಯ ಕೋಟೆಯ ಮುರಿಯಲವನೆದೆ ಯೊಡೆದು ದೀರ್ಘಪ್ರಜ್ಞನಿತ್ತನು ಬೇಹ ವಸ್ತುಗಳ ೪
ನಡೆದು ಮು೦ದೆ ವಿದೇಹನನು ಸದೆ ಬಡಿದು ಮತ್ತೆ ಕಿರಾತ ಬಲವವ ಗಡಿಸಿ ಕಾದಿದನ೦ತವದರೊಳಗೇಳು ಮಾನಿಸರು ಒಡೆಯರವದಿರವ೦ಗಡವ ಹುಡಿ ಹುಡಿಯ ಮಾಡಿ ನಿಷಾದ ವರ್ಗವ ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ ೬
ಸೂರೆಗೊ೦ಡಲ್ಲಿ೦ದ ನಡೆದನು ಮೀರಿ ಗ೦ಗಾ ಸ೦ಗಮವ ಕೈ ಮೀರಲರಿಯದೆ ಸ೦ಧಿಗವನೀಶ್ವರರು ವಶವಾಯ್ತು ಹೇರಿಸಿದನನುಪಮದ ವಸ್ತುವ ನಾರು ಸಾವಿರ ಭ೦ಡಿಯಲಿ ನಡೆ ದೇರಿ ಹೊಯ್ದನು ವಾಸುದೇವನ ಪೌ೦ಡ್ರಕಾಹ್ವಯನ ೮
ಪುರವರವನಲ್ಲಿ೦ದ ಮೌಲ್ಯದ ತೆರಳಿಕೆಯಮಾಡಿದನು ಮೂಡಲು ಹರಿದು ಮುರಿದು ಸಮುದ್ರಸೇನನ ಸರ್ವಗವತೆಯಲಿ ತೆರಳಿದಲ್ಲಿ೦ದಿ೦ದ್ರಸೇನನ ನೊರಸಿ ಭ೦ಡಾರವನು ಹೇರಿಸಿ ಮರಳಿ ವ೦ಗನನಪ್ಪಳಿಸಿದನು ಲುಬ್ಧಕರು ಸಹಿತ ೯
ಸಾರಲೋಹಿತನೆ೦ಬ ಸಾಗರ ತೀರವಾಸಿಗಳೊಳ ಕುರುವದ ವಿ ಕಾರಚೋನೆಗೆ ಚೀನ ಬೋಟಕರನು ನಿವಾಸಿಗಳ ಓರೆ ಬಾಗಿನ ಕುರುವ ಕೊಳ್ಳದ ಗೌರಿಕರನಪ್ಪಳಿಸಿ ಮಲೆಯ ವಿ ಹಾರಿಗಳ ಬರಿಗೈದು ತು೦ಬಿಸಿದನು ಸುವಸ್ತುಗಳ ೧೦
ಧಾಳಿ ಹರಿದುದು ಪ೦ಚಗೌಳವ ರಾಳುವೊಡ್ಡಿಯರಾ೦ಧ್ರಜಾಳಾ೦ ದ್ರಾಳಿಗಳನಪ್ಪಳಿಸಿ ಹೂಡಿಸಿದನು ಮಹಾಧನವ ಮೇಲು ದುರ್ಗದ ಪಾರ್ವತೇಯರಿ ಗಾಳು ಹರಿದುದು ಸ೦ದುಗೊ೦ದಿಯ ಶೈಲ ಗುಹೆಗಳೊಳರಸಿ ಹಿಡಿದನು ಬಹಳ ಧನಯುತರ ೧೧
ಅರಸಿದನು ನಾವೆಗಳಲಬ್ಧಿಯ ಕುರುವದಲಿ ಕೊಬ್ಬಿದ ಧನಾಡ್ಯರ ಮುರಿದು ಮರಳಿದು ಕೆಲಬಲದಲಾ ದ್ವೀಪ ಪಾಲಕರ ಸೆರೆವಿಡಿದು ತನಿ ಸೂರೆಯಲಿ ಪಡೆ ನೆರೆ ದಣಿಯಲಾ ಮ್ಲೇಚ್ಛ ವರ್ಗವ ತರಿದು ಶೋಧಿಸಿ ತೆಗೆದನಲ್ಲಿಯ ಸಾರ ವಸ್ತುಗಳ ೧೨
ಆ ಮಹಾ ಭೋಟಕ ಮಹಾಹ್ವಯ ಧಾಮದಲಿ ದಸ್ಯುಗಳನತಿ ನಿ ಸ್ಸೀಮ ಯವನ ಕರೂಷರನು ತಾಗಿದನು ವಹಿಲದಲಿ ಹೇಮ ಮುಕ್ತಾರಜತ ಚ೦ದನ ರಾಮಣೀಯಕ ವಸ್ತು ನಿಚಯದ ಸೀಮೆಗಳ ನಾನರಿಯೆನಳವಡಿಸಿದನು ಕಲಿಭೀಮ ೧೩
ಪೂತು ಫಲುಗುಣ ನಿನ್ನ ಕುಲಕಭಿ ಜಾತ ಶೌರ್ಯಕೆ ಗರುವಿಕೆಗೆ ಸರಿ ಮಾತನಾಡಿದೆ ಸಲುವುದೈ ನಿನಗೆನುತ ಕೊ೦ಡಾಡಿ ಈತನುತ್ತರ ದೆಸೆಗೆ ಭೀಮನು ಶಾತಮನ್ಯುವ ದೆಸೆಗೆ ಯಮಳರ ಭೀತರಿದ್ದೆಸೆಗೆ೦ದು ವೇದವ್ಯಾಸ ನೇಮಿಸಿದ ೧೨
ನೆರಹಿ ಬಲವನು ನಾಲ್ಕು ದಿಕ್ಕಿಗೆ ಪರುಠವಿಸಿದರು ಫಲುಗುಣನನು ತ್ತರಕೆ ಮೂಡಲು ಪವನಸುತ ದಕ್ಷಿಣಕೆ ಸಹದೇವ ವರುಣ ದಿಕ್ಕಿಗೆ ನಕುಲನೀ ನಾ ಲ್ವರಿಗೆ ಕೊಟ್ಟನು ವೀಳೆಯವ ಹಿರಿ ಯರಸಿ ತ೦ದಳು ತಳಿಗೆ ತ೦ಬುಲ ಮ೦ಗಳಾರತಿಯ ೧೩
ಪರಮ ಲಗ್ನದೊಳಿ೦ದು ಕೇ೦ದ್ರದೊ ಳಿರಲು ಗುರು ಭಾರ್ಗವರು ಲಗ್ನದೊ ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶ ಸ್ಥಿತಿಯ ಕರಣ ತಿಥಿ ನಕ್ಷತ್ರ ವಾರೋ ತ್ಕರದಲಭಿಮತ ಸಿದ್ಧಿಯೋಗದೊ ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ ೧೪
ಅರಸವೇದವ್ಯಾಸ ಧೌಮ್ಯಾ ದ್ಯರಿಗೆ ಬಲವ೦ದೆರಗಿ ಕು೦ತಿಯ ಚರಣಧೂಳಿಯಕೊ೦ಡು ವಿಪ್ರವ್ರಜಕೆ ಕೈಮುಗಿದು ಅರಸಿಯರು ದೂರ್ವಾಕ್ಷತೆಯ ದಧಿ ವಿರಚಿತದ ಮಾ೦ಗಲ್ಯವನು ವಿ ಸ್ತರಿಸೆ ಬಹುವಿಧ ವಾದ್ಯದಲಿ ಹೊರವ೦ಟರರಮನೆಯ ೧೫
ಅರಸ ಕೇಳೈ ಮೊದಲಲರ್ಜುನ ಚರಿತವನು ವಿಸ್ತರದಲರುಪುವೆ ನುರುಪರಾಕ್ರಮಿ ನಡೆದು ಬಿಟ್ಟನು ಸಾಲ್ವ ದೇಶದಲಿ ಪುರಕೆ ದೂತರ ಕಳುಹಲವನಿವ ರುರವಣೆಗೆ ಮನವಳುಕಿ ಕೊಟ್ಟನು ತುರುಗ ಗಜ ರಥ ಧನ ವಿಲಾಸಿನಿ ಜನವನುಚಿತದಲಿ ೧೬
ಅವನ ಕಾಣಿಸಿಕೊ೦ಡು ರಾಜ್ಯದೊ ಳವನ ನಿಲಿಸಿ ತದೀಯ ಸೇನಾ ನಿವಹ ಸಹಿತಲ್ಲಿ೦ದ ನಡೆದನು ಮು೦ದೆ ವಹಿಲದಲಿ ಅವನಿಪತಿ ಕಟದೇವನೆ೦ಬುವ ನವಗಡಿಸಿ ಸರ್ವಸ್ವವನು ಕೊ೦ ಡವನ ಬಲಸಹಿತಾ ದ್ಯುಮತ್ಸೇನಕನ ಝೋ೦ಪಿಸಿದ ೧೭
ಆತನನು ಗೆಲಿದನುಸುನಾಭನ ನೀತಿಗೆಡಿಸಿ ತದೀಯ ಸೇನಾ ವ್ರಾತ ಸಹಿತಲ್ಲಿ೦ದ ಪ್ರತಿವಿ೦ದ್ಯಕನನಪ್ಪಳಿಸಿ ಆತನರ್ಥವಕೊ೦ಡು ತತ್ಪ್ರಾ ಗ್ಜ್ಯೋತಿಷಕೆ ಧಾಳಿಟ್ಟನಲ್ಲಿ ಮ ಹಾತಿಬಲನವನೊಡನೆ ಬಲುಹಾಯ್ತರ್ಜುನನ ಸಮರ ೧೮
ಒ೦ದು ತಿ೦ಗಳು ಪಲವು ಮನ್ನಣೆ ಯಿ೦ದ ಮನ್ನಿಸಿ ತನ್ನ ಸೇನಾ ವೃ೦ದವನು ಹೇಳಿದನು ಬಳಿಯಲಿ ಕಳುಹಿದನು ನರನ ಮು೦ದೆ ನಡೆದನು ರಾಮಗಿರಿಯಲಿ ನಿ೦ದು ಕಪ್ಪವಕೊ೦ಡು ನಡೆದನು ಮು೦ದಣೀಶಾನ್ಯದಲಿ ಹೊಕ್ಕನು ಭುವನಪರ್ವತವ ೨೩
ಆಗಿರೀ೦ದ್ರ ನಿವಾಸಿಗಳ ಸರಿ ಭಾಗಧನವನುಕೊ೦ಡು ಬಳಿಕ ಮ ಹಾಗಜಾಶ್ವನ ಸೂರೆಗೊ೦ಡನು ಮು೦ದೆ ದ೦ಡೆತ್ತಿ ಆಗಯಾಳರಗಾವಿಲರ ನಿ ರ್ಭಾಗಧೇಯರ ಮಾಡಿಯುತ್ತರ ಭಾಗದಲಿ ತಿರುಗಿತ್ತುಪಾಳಯವರಸ ಕೇಳೆ೦ದ ೨೪
ಧಾಳಿಯಿಟ್ಟನು ರೋಚಮಾನನ ಮೇಲೆ ಕಪ್ಪವಕೊ೦ಡು ಬಿಟ್ಟುದು ಪಾಳೆಯವು ಚಿತ್ರಾಯುಧನ ನರಸಿ೦ಹ ನಗರಿಯಲಿ ಮೇಲೆ ವ೦ಗರ ಮುರಿದು ವರನೇ ಪಾಳ ಕರ್ಪರ ಹೂಣಿಯರನು ವಿ ಶಾಲ ಕಾ೦ಭೋಜಾದಿಗಳನಪ್ಪಳಿಸಿದನು ತಿರುಗಿ ೨೭
ಪಾರಶೀಕ ಕಿರಾತ ಬರ್ಬರ ಪಾರಿಯಾತ್ರರ ಮುರಿದು ಸರ್ವ ವಿ ಹಾರವನು ಮಾಡಿದನು ಮ್ಲೇಚ್ಚ ಸಹಸ್ರ ಕೋಟಿಗಳ ಕ್ಷಾರಕರ ಹೂಣಕರ ಡೊಕ್ಕರ ಪಾರಕರ ಬುರಸಹಣ ಭೂಪರೊ ಳಾರುಭಟೆಯಲಿ ಕಾದಿ ಕೊ೦ಡನು ಸಕಲ ವಸ್ತುಗಳ ೨೮
ಎರಡು ಸಾವಿರ ಯೋಜನವು ಹಿಮ ಗಿರಿಯ ಬಹಳೋತ್ಸೇದ ಶಿಖರಕೆ ಸರಿಸದಲಿ ಹತ್ತಿದುದು ಪಾಳಯವೇನ ಹೇಳುವೆನು ಕರಿ ತುರಗ ವರ ರಥ ಪದಾತಿಗೆ ಪರಿಗಣನೆಯೆಲ್ಲಿಯದು ಹಿಮಗಿರಿ ಯೆರಡು ಸಾವಿರದಗಲ ತಿರುಗಿತು ರಾಯ ಕೇಳೆ೦ದ ೩೦
ಗಿರಿಯ ಕೋಣೆಯ ಕುಹರ ಗುಹೆಗಳ ಗರುವರು೦ಟೆ೦ದಾ ಪುಳಿ೦ದರ ನೊರಸಿ ಕಾಣಿಸಿಕೊ೦ಡು ಕೊ೦ಡನು ಸಕಲ ವಸ್ತುಗಳ ಗಿರಿಯನಿಳಿದುದು ನಡೆದು ಬಲ ಕಿ೦ ಪುರುಷ ಖ೦ಡದ ಬಹಳ ನದಿಗಳ ಲೆರಡು ತಡಿಯಲಿ ತಳಿತು ಬಿಟ್ಟುದು ವನ ವನ೦ಗಳಲಿ ೩೧
ಅದು ಗಣನೆಗೊ೦ಬತ್ತು ಸಾವಿರ ವದರೊಳಿದ್ದುದು ಯಕ್ಷ ಕಿನ್ನರ ಸುದತಿಯರು ಕಿ೦ಪುರುಷರತಿರಾಗಿಗಳು ಸುಖಮಯರು ಇದರ ಘಲ್ಲಣೆಗಾನಲೇನ ಪ್ಪುದು ತದೀಯ ಜನ೦ಗಳಿತ್ತುದು ಸುದತಿಯರನಾ ಮ೦ಡಲಕೆ ಮೀಟಾದ ವಸ್ತುಗಳ ೩೨
ಅಲ್ಲಿ ಕೆಲಕಡೆಯಲ್ಲಿ ಗಿರಿ ಗುಹೆ ಯಲ್ಲಿ ನೆರೆದ ಕಿರಾತ ವರ್ಗವ ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ ಮೆಲ್ಲಮೆಲ್ಲನೆ ಹೇಮ ಕೂಟದ ಕಲ್ಲನಡರಿದನಾ ಮಹಾದ್ರಿಗ ಳೆಲ್ಲ ಹಿಮಶೈಲದ ಮಹೋನ್ನತಿ ಬಹಳ ವಿಸ್ತಾರ ೩೩
ಅಡರಿತೀ ಬಲವಿದರ ಬೊಬ್ಬೆಯ ಗಡಬಡೆಗೆ ಪದಘಟ್ಟಣೆಗೆ ಹುಡಿ ಹುಡಿಯಲಾ ಗಿರಿಕೋಟೆ ಕೋಳಾಹಳದ ಕೊಬ್ಬಿನಲಿ ನಡೆದು ಬಿಟ್ಟುದು ಗಿರಿಯ ತುದಿಯಲಿ ತುದುಕಿದುದು ನಾನಾ ದಿಗ೦ತವ ತಡೆಯದದುಭುತ ವಾದ್ಯ ಗಜ ಹಯ ರಥದ ನಿರ್ಘೋಷ ೩೪
ಹೇಮಕೂಟದ ಗಿರಿಯ ಗ೦ಧ ರ್ವಾಮರರ ಝೋ೦ಪಿಸಿದನವರು ದ್ದಾಮ ವಸ್ತುವ ಕೊ೦ಡನಿಳಿದನು ಬಳಿಕ ಪರ್ವತವ ಆಮಹಾ ಹರಿವರುಷದಲ್ಲಿಯ ಸೀಮೆ ಯೋಜನ ನವ ಸಹಸ್ರ ವಿ ರಾಮವದರೊಳಗೆಲ್ಲ ವಿವರಿಸಲರಿಯೆ ನಾನೆ೦ದ ೩೫
ಅದು ಮಹಾ ರಮಣೀಯತರವ೦ ತದರೊಳಿದ್ದುದು ಶುದ್ಧಭೋಗಾ ಸ್ಪದರು ಯಕ್ಷೋರಕ್ಷ ಗ೦ದರ್ವಾಪ್ಸರಾ (ಪಾ: ಗ೦ದರ್ವಾಪ್ಸರೋ) ನಿಕರ ಕುದುರೆ ರಥ ಗಜಪತ್ತಿ ನಿರ್ಘೋ ಷದಲಿ ಬೆಬ್ಬಳೆಯಾಯ್ತು ಬೇಳ೦ ಬದ ವಿಘಾತಿಗೆ ಸಿಲುಕಿ ತೆತ್ತುದು ಸಕಲ ವಸ್ತುಗಳ ೫೩
ಎಂದು ಬಳಿಕೇಕಾಂತ ಭವನದೊ ಳಂದು ಮುನಿಯಿರಲಂಬಿಕೆಯನರ ವಿಂದಮುಖಿಯಟ್ಟಿದಳು ಸೊಸೆಯನು ಮುನಿಯ ಪೂರೆಗಾಗಿ ಬಂದು ಮುನಿಪನ ದಿವ್ಯರೂಪವ ನಿಂದುಮುಖಿ ಕಂಡಕ್ಷಿಗಳ ಭಯ ದಿಂದ ಮುಚ್ಚಿದಳಾಕೆ ತಿರುಗಿದಳರಸ ಕೇಳೆಂದ ೬
ಬಂದು ಮುನಿಪತಿ ತಾಯ್ಗೆ ಕೈಮುಗಿ ದೆಂದನಂಬಿಕೆಯಲ್ಲಿ ಜನಿಸುವ ನಂದನನು ಜಾತ್ಯಂಧನಂಬಾಲಿಕೆಗೆ ಪಾಂಡುಮಯ ಬಂದ ಬಳಿಕಿನ ಚಪಲೆಗತಿಬಲ ನೆಂದು ಹೇಳಿದು ತನಗೆ ನೇಮವೆ ಯೆಂದು ತನ್ನಾಶ್ರಮಕೆ ಸರಿದನು ಬಾದರಾಯಣನು ೮
ತುಂಬಿದುದು ನವಮಾಸ ಜನಿಸಿದ ನಂಬಿಕೆಯ ಬಸುರಿನಲಿ ಸೂನು ಗ ತಾಂಬಕನು ಮಗನಾದನಂಬಾಲಿಕೆಕೆಗೆ ಪಾಂಡುಮಯ ಚುಂಬಿಸಿತು ಪರಿತೋಷ ನವ ಪುಳ ಕಾಂಬುಗಳು ಜನಜನಿತವದನೇ ನೆಂಬೆನುತ್ಸವವನು ಕುಮಾರೋದ್ಭವದ ವಿಭವದಲಿ ೯
ಜಾತಕರ್ಮಾದಿಯನು ಪಾರ್ಥಿವ ಜಾತಿ ವಿಧಿವಿಹಿತದಲಿ ಗಂಗಾ ಜಾತ ಮಾಡಿಸಿ ತುಷ್ಟಿಪಡಿಸಿದ ನಿಖಿಳ ಯಾಚಕರ ಈತನೇ ಧೃತರಾಷ್ಟ್ರನೆರಡನೆ ಯಾತ ಪಾಂಡು ವಿಲಾಸಿನೀ ಸಂ ಭೂತನೀತನು ವಿದುರನೆಂದಾಯ್ತುವರಿಗಭಿಧಾನ ೧೦
ಬೆಳೆವುತಿರ್ದರು ಹರಿಣಪಕ್ಷದ ನಳಿನರಿಪುವಿನವೊಲ್ ಕುಮಾರರು ಕುಲವಿಹಿತ ಚೌಲೋಪನಯನವನಿಬ್ಬರಿಗೆ ರಚಿಸಿ ಕಲಿತ ವಿದ್ಯರ ಮಾಡಿ ತಾಯು ಮ್ಮಳಿಸದಂತಿರೆ ಸೋಮವಂಶದ ಬೆಳವಿಗೆಯನೇ ಮಾಡಿಕೊಂಡಾಡಿದನು ಕಲಿಭೀಷ್ಮ ೧೧
ಧಾರುಣೀಪತಿ ಚಿತ್ತವಿಸು ಗಾಂ ಧಾರದೇಶದ ಸುಬಲರಾಜ ಕು ಮಾರಿ ಕುಲವಧುವಾದಳಾ ಧೃತರಾಷ್ಟ್ರ ಭೂಪತಿಗೆ ನಾರಿಯರೊಳುತ್ತಮೆಯಲಾ ಗಾಂ ಧಾರಿಯೆನಿಸಿ ಪತಿವ್ರತಾ ವಿ ಸ್ತಾರಗುಣದಲಿ ಮೆರೆದಳಬಲೆ ಸಮಸ್ತಜನ ಹೊಗಳೆ ೧೨
ಒಂದು ದಿನ ದೂರ್ವಾಸಮುನಿ ನೃಪ ಮಂದಿರಕೆ ಬರಲಾ ಮಹೀಪತಿ ಬಂದ ಬರವಿನಲವರ ಮರೆದನು ರಾಜಕಾರ್ಯದಲಿ ಇಂದು ಕುಂತೀಭೋಜನೊಡೆತನ ಬೆಂದುಹೋಗಲಿಯೆಂಬ ಶಾಪವ ನಿಂದುಮುಖಿ ನಿಲಿಸಿದಳು ಹೊರಳಿದಳವರ ಚರಣದಲಿ ೧೪
ಎನ್ನಬಾರದಲೇ ಋಷಿಪ್ರತಿ ಪನ್ನ ಮಂತ್ರವಮೋಘವದರಿಂ ದೆನ್ನ ತೂಕದ ಮಗನಹನು ನೀನಂಜಬೇಡೆನುತ ಕನ್ನಿಕೆಯ ಮುಟ್ಟಿದನು ಮುನ್ನಿನ ಕನ್ನೆತನ ಕೆಡದಿರಲಿಯೆನುತವೆ ತನ್ನ ರಥವಿದ್ದೆಡೆಗೆ ರವಿ ತಿರುಗಿದನು ವಹಿಲದಲಿ ೧೯
ತಾತ ಬಿನ್ನಹ ನಿನ್ನೆ ವೈರಿ ವ್ರಾತವನು ಗೆಲಿದಾತನೀ ತೋ ರ್ಪಾತನೀತನ ಮುಂದೆ ಮೆರೆವವ ಕೀಚಕಾಂತಕನು ಈತ ನಕುಲನು ವಾಮದಲಿ ನಿಂ ದಾತ ಸಹದೇವಾಂಕನನಿಬರಿ ಗೀತ ಹಿರಿಯನು ಧರ್ಮನಂದನನೆಂದು ತೋರಿಸಿದ ೧೩
ರಮಣಿಯೈವರಿಗೀಕೆ ಕೆಲದಲಿ ಕಮಲಮುಖಿಯನು ನೋಡು ತಾವಿವ ರಮಳ ಗುಣ ಗಂಭೀರ ರಾಯರು ಪಾಂಡು ನಂದನರು ನಮಗೆ ಭಾರಿಯ ಭಾಗ್ಯಲಕ್ಷ್ಮಿಯ ಮಮತೆಯಾಯ್ತಿನ್ನೇನು ನೃಪಪದ ಕಮಲದಲಿ ಬೀಳುವೆವು ನಡೆ ನಡೆ ಧನ್ಯರಹೆವೆಂದ ೧೪
ಈತನೇ ಧರ್ಮಜನು ದಿಟ ತಾ ನೀತನೇ ಪವನಜನು ನಿಶ್ಚಯ ವೀತನೇ ಫಲುಗುಣನು ಮಾದ್ರೀತನುಜರೇ ಇವರು ಈ ತಳೋದರಿ ದ್ರುಪದ ಸುತೆಯೇ ಕೌತುಕವಲೇ ಭುವನಜನ ವಿ ಖ್ಯಾತರೆಲ್ಲಿಂದೆಲ್ಲಿ ಮೂಡಿದರೆನುತ ಬೆರಗಾದ ೧೫
ವರುಷವೊಂದಜ್ಞಾತ ವಾಸವ ನಿರದೆ ನೂಕಿದರಿಲ್ಲಿ ಬಳಕೆಯ ಹೊರೆಯ ಹೆಸರವು ಬೇರೆ ನಡವಳಿಯಂಗವದು ಬೇರೆ ಮರುಳನಂತಿರೆ ಜಗಕೆ ತೋರನೆ ಪರಮ ತತ್ವಜ್ಞಾನಿ ನಮ್ಮೀ ಯರಸುತನ ಫಲವಾಯ್ತು ನಡೆಯೆಂದನು ಕುಮಾರಕನು ೧೬
ದರುಶನಕೆ ಮಣಿ ರತುನ ಕನಕವ ತರಿಸಿ ಮುದದಲಿ ಮುಳುಗಿ ನಿಜ ಪರಿ ಕರ ಸಹಿತ ಮೈಯಿಕ್ಕಿದನು ಕಾಣಿಕೆಯನೊಪ್ಪಿಸಿದ ವರ ನೃಪಾಲ ತ್ರಾಹಿ ಭುವನೇ ಶ್ವರ ಪರಿತ್ರಾಯಸ್ವ ಕರುಣಿಸು ಕರುಣಿಸೆಂದಂಘ್ರಿಗಳ ಹಿಡಿದನು ಮತ್ಸ್ಯ ಭೂಪಾಲ ೧೭
ಬಗೆದೆನಪರಾಧವನು ಕರುಣಾ ಳುಗಳ ಬಲ್ಲಹ ನೀನು ನಿನ್ನಂ ಘ್ರಿಗಳಿಗೀ ತಲೆ ಬಂಟ ನೀನಿದ ಕಾಯಬೇಕೆನುತ ಮಿಗೆ ಭಕುತಿ ಭಾವದಲಿ ನಿಜ ಮಂ ತ್ರಿಗಳು ಮಕ್ಕಳು ಸಹಿತ ಮನ ನಂ ಬುಗೆಯ ಮೆರೆದನು ಮತ್ಸ್ಯ ಭೂಪ ಮಹೀಶರಿದಿರಿನಲಿ ೧೮
ಆ ಸುದೇಷ್ಣೆ ಕುಮಾರಿಯೊಡನೆ ವಿ ಳಾಸಿನೀಜನ ಸಹಿತ ರಾಣೀ ವಾಸದಲ್ಲಿಗೆ ಬಂದು ಕಾಣಿಕೆ ಕೊಟ್ಟು ಪೊಡವಂಟು ಆ ಸಕಲ ಪರಿವಾರ ಪುರಜನ ದೇಶಜನ ಕಾಣಿಕೆಯನಿತ್ತು ಮ ಹೀಶನಿಗೆ ಮೈಯಿಕ್ಕಿ ಕಂಡುದು ಬಹಳ ಹರುಷದಲಿ ೧೯
ಮುಗುಳು ನಗೆಯಲಿ ಭೀಮ ಪಾರ್ಥರ ಮೊಗವ ನೋಡಿದನವನಿಪತಿ ಕೈ ಮುಗಿದು ತಲೆವಾಗಿದರು ತಮ್ಮಂದಿರು ಮಹಿಪತಿಗೆ ತೆಗೆಸಿದರು ಕಾಣಿಕೆಯನಾ ಮಂ ತ್ರಿಗಳನಾ ಪರಿವಾರವನು ದೃಗು ಯುಗದ ಕರುಣಾ ರಸದಲನಿಬರ ಹೊರೆದು ಮನ್ನಿಸಿದ ೨೦
ದೇಶ ನಿಮ್ಮದು ನಗರ ಹೆಚ್ಚಿದ ಕೋಶ ನಿಮ್ಮದು ನನ್ನ ಜೀವ ವಿ ಳಾಸ ನಿಮ್ಮದು ಸಲಹಬೇಹುದು ಬಿನ್ನಹದ ಹದನ ಈ ಸಮಂಜಸ ದಿವಸದಲಿ ಸಿಂ ಹಾಸನದಲಭಿಷೇಕವನು ಭೂ ಮೀಶ ವಿಸ್ತರಿಸುವೆನು ಚಿತ್ತೈಸೆಂದನಾ ಭೂಪ ೨೨
ನೊಂದವರು ಭೀಮಾರ್ಜುನರು ಹಗೆ ಯಿಂದ ಹಳುವವ ಹೊಕ್ಕು ಮನಸಿನ ಕಂದು ಕಸರಿಕೆ ಹೋಗದಾ ದುರ್ಯೋಧನಾದಿಗಳ ಕೊಂದು ಕಳದಲಿ ಮತ್ತೆ ಗಜ ಪುರಿ ಗೆಂದು ಗಮಿಸುವೆವೆಂಬ ತವಕಿಗ ರಿಂದು ತಾನೇ ಬಲ್ಲರೆಂದನು ಧರ್ಮನಂದನನು ೨೪
ಎಂದನುತ್ತರನರಸನಂಘ್ರಿಯೊ ಳಂದು ಮಕುಟವ ಚಾಚಿ ಬಿನ್ನಹ ವಿಂದು ನೇಮವ ಕೊಡಿ ಕುಮಾರಿಯನೀವೆನರ್ಜುನಗೆ ಎಂದಡೇಳೇಳೆಂದು ನಸು ನಗೆ ಯಿಂದ ಪಾರ್ಥನ ನೋಡೆ ಕೈ ಮುಗಿ ದೆಂದನಾತನು ಮನದ ನಿಶ್ಚಯವನು ಯುಧಿಷ್ಠಿರಗೆ ೨೫
ವರುಷವಿವಳಲಿ ನಾಟ್ಯ ವಿದ್ಯೆಯ ಪರುಟವಿಸಿದೆನು ತಂದೆಯಂತೀ ತರುಣಿ ಭಜಿಸಿದಳಾ ಪ್ರಕಾರ ರಹಸ್ಯ ದೇಶದಲಿ ಗುರುತನದ ಗರುವಾಯಿಯೆತ್ತಲು ಅರಸಿಯೆಂಬುದಿದಾವ ಮತವೀ ವರ ಕುಮಾರಿಯನೀವಡಭಿಮನ್ಯುವಿಗೆ ಕೊಡಲೆಂದ ೨೬
ದಾಟಿದೆವು ನುಡಿದವಧಿಯನು ವೈ ರಾಟ ಪುರದಲಿ ತುರುವಿಡಿದು ಮೈ ನೋಟಕೋಸುಗ ಬಂದು ನುಗ್ಗಾಯಿತ್ತು ಕುರುಸೇನೆ ತೋಟಿ ಜಯಿಸಿದೊಡೆಮ್ಮನರಿದು ವಿ ರಾಟ ಮನ್ನಿಸಿ ತನ್ನ ಮಗಳ ಕಿ ರೀಟಿ ತನಯಂಗೀವ ಭರವಿದೆ ದೇವರವಧರಿಸಿ ೩೬
ಮದುವೆಯೆಂಬುದು ನೆವ ನಿಜ ಶ್ರೀ ಪದವ ತೋರಿಸಬೇಕು ವನ ವಾ ಸದ ಪರಿಕ್ಲೇಶಾನು ಸಂತಾಪವನು ಬೀಳ್ಕೊಡಿಸಿ ಕದಡು ಹೋಗಲು ಕಾಣಬೇಹುದು ಹದುಳವಿಟ್ಟೆಮಗುಚಿತ ವಚನದ ಹದವಳೆಯಲುತ್ಸಾಹಸಸಿಯನು ದೇವ ಸಲಹುವುದು ೩೭
ಚಿಂತೆ ಬೀತುದು ಪಾಂಡು ಮಾವನ ಸಂತತಿಗಳಜ್ಞಾತ ವಾಸವ ನೆಂತು ಪಂಥದ ಮೇಲೆ ಕಳೆದರೊ ನಮ್ಮ ಪುಣ್ಯವಿದು ಕುಂತಿ ದೇವಿಯರುಮ್ಮಳಿಸೆ ನಾ ವೆಂತು ಬದುಕುವೆವಕಟೆನುತ್ತ ನಿ ರಂತರವು ಮರುಗುವನು ಬೊಪ್ಪನು ಶಿವ ಶಿವಾಯೆಂದ ೪೦
ಭವಣಿಗೆಯ ಬಂದಡವಿಯಲಿ ಪಾಂ ಡವರು ನವೆದರು ರಾಜ್ಯವನು ಯಾ ದವರು ನಾವನುಭವಿಸುತಿದ್ದೆವು ನವೆದರಿನ್ನಬರ ಅವರ ಸೊಗಸೇ ನಮ್ಮ ಸೊಗಸುಗ ಳವರ ದುಗುಡವೆ ನಮ್ಮದದರಿಂ ದವರ ವಿಮಳಾಭ್ಯುದಯ ನಮಗೆಂದಸುರರಿಪು ನುಡಿದ ೪೧
ಕಾಲ ಕೈಗೂಡುವೊಡೆ ಲೇಸಿನ ಮೇಲೆ ಲೇಸುಗಳೊದಗುವವು ಭೂ ಪಾಲ ಕುಂತಿಯ ಸುತರ ಬೆಳವಿಗೆ ಮೊದಲ ಮಂಗಳವು ಮೇಲೆ ತಂಗಿಯ ಮಗನ ಮದುವೆ ವಿ ಶಾಲ ಸುಖವದು ನಿಖಿಳ ಯಾದವ ಜಾಲ ಪಯಣವ ಮಾಡಲೆಂದಸುರಾರಿ ನೇಮಿಸಿದ ೪೨
ಬಳಿಕ ಸುಮುಹೂರ್ತದಲಿ ಮತ್ಸ್ಯನ ಹೊಳಲ ಹೊರವಂಟುತ್ತರ ದಿಶಾ ವಳಯದಲಿ ರಚಿಸಿದರುಪಪ್ಲವ್ಯಾಖ್ಯ ಪುರವರವ ನೆಲನಗಲದಲಿ ಕಟ್ಟಿ ಕೇರಿಯ ನಳವಡಿಸಿದರು ನಿಖಿಳ ನೃಪರಿಗೆ ಬಳಿಯನಟ್ಟಿದನುತ್ತರೋತ್ತರವಾದುದಿವರುದಯ ೪೪
ಜೋಳಿ ಹರಿದವು ನಿಖಿಳ ರಾಯರಿ ಗೋಲೆಯುಡುಗೊರೆಯಿಕ್ಕಿದವು ಪಾಂ ಚಾಲಪತಿ ಹೊರವಂಟ ಮೂರಕ್ಷೋಣಿ ಬಲ ಸಹಿತ ನೀಲನು ಯುಧಾಮನ್ಯು ಸಮರ ಕ ರಾಳ ಧೃಷ್ಟದ್ಯುಮ್ನ ಕೀರ್ತಿ ವಿ ಶಾಲ ಧೀರ ಶಿಖಂಡಿ ಸಹಿತಾ ದ್ರುಪದನೈತಂದ ೪೫
ಇದಿರುಗೊಂಡರು ಹರುಷದಲಿ ದುರು ಪದಿಯ ಬಾಂಧವ ಪೈಕವನು ಮಿಗೆ ಮುದದಿ ಕಾಣಿಸಿಕೊಂಡರಖಿಳ ಮಹಾ ಮಹೀಶ್ವರರ ಒದಗಿತಖಿಳಕ್ಷೋಹಿಣಿ ಬಲ ಸಂ ಪದವನುನ್ನತ ವಸ್ತುಗಳ ಸೊಂ ಪೊದವಿದವು ಕೈಗೈದು ಮದುವೆಯ ಮಂಗಳಾಭ್ಯುದಯ ೪೬
ದೇವನೀ ಬಹನೆಂದು ಬಂದರು ದಾವಣಿಯ ಹವಣರಿದು ಬಳಿಕ ಮ ಹಾ ವಿಳಾಸದಳೊಪ್ಪವಿಟ್ಟರು ತಮ್ಮ ನಗರಿಗಳ ಹೂವಲಿಯ ವೀಧಿಗಳ ನವ ರ ತ್ನಾವಳಿಯ ಸೂಸಕದ ಭದ್ರದ ಲೋವೆಗಳ ಲಂಬಳದಲೆಸೆದವು ಕೇರಿ ಕೇರಿಗಳು ೪೭
ಅರಸಿಯರ ಬಗೆಗೊಳ್ಳ ಮಕ್ಕಳ ಸರಕು ಮಾಡನು ದೇಶ ಕೋಶದ ಸಿರಿಯ ಗಣಿಸನು ಖಡ್ಡಿಗೊಳ್ಳನು ಗಾಢಗರ್ವಿತರ ಹರಿ ಪರಾಯಣರೆಂದೊಡವರಿಗೆ ಹರಹಿಕೊಂಬನು ಮಗನ ಶೀಲವು ನರರ ಪರಿಯಲ್ಲೆಂದನಾ ವಸುದೇವನಳಿಯಂಗೆ ೬೩
ಲೋಗರೇ ನೀವೆಮಗೆ ನಿವಗರ ಗಾಗಿ ಕರಗುವನದು ನಿಲಲಿ ತನ ಗಾಗದವರಿಗೆ ತನ್ನ ತೆರುವನು ಕೊಲುವ ಹಗೆಗೊಲಿವ ಲೋಗರೆನ್ನವರೆಂದು ಲೋಗರಿ ಗಾಗಿ ಬದುಕುವೆನೆಂಬ ಬಲುಗೈ ಚಾಗಿ ಕೃಷ್ಣನನೇನ ಹೇಳುವೆನೆಂದನರಸಂಗೆ ೬೪
ನಗುತ ಹರಿ ನಿಂದಿರಲು ಕೈ ದಂ ಡಿಗೆಯವರು ಹೊದ್ದಿದರು ರೂವಾ ರಿಗೆಗೆ ಬಿಜಯಂಗೈದನುಘೆಯೆಂದುದು (ಪಾ: ಬಿಜಯಂಗೈದನುಘೇಯೆಂದುದು) ಸುರಸ್ತೋಮ ಬಿಗಿದ ದಡ್ಡಿಯ ಬದ್ದರದ ಬೀ ಯಗದ ರಾಣೀವಾಸದಂದಣ ತೆಗೆದು ನಡೆದುದು ಮುಂದೆ ಸಂತೋಷದಲಿ ಯದುಸೇನೆ ೬೮
ಹೊಕ್ಕನಸುರಾರಾತಿ ಪಾಂಡವ ರಿಕ್ಕೆಲದಿ ಬರೆ ನಗರಜನ ಮೈ ಯಿಕ್ಕಿ ಬೀದಿಯ ಧೂಳು ಕವಿದುದು ಮುಂದೆ ಸಂದಣಿಸಿ ಹೊಕ್ಕು ಹೊಗಳುವ ಸುತಿಗಳಿಗೆ (ಸ್ತುತಿಗಳಿಗೆ?) ಕೈ ಮಿಕ್ಕ ಕಳ್ಳನು ಪಾಂಡು ಸುತರಿಗೆ ಸಿಕ್ಕಿದನು ಶಿವಯೆನುತಲಿರ್ದುದು ಸೂರಿ ಸಂದೋಹ ೬೯
ಮೇಲೆ ಬೀಳುವ ಮಂದಿಯನು ಕೈ ಗೋಲಿನವರಪ್ಪಳಿಸೆ ಲಕ್ಷ್ಮೀ ಲೋಲನವದಿರ ಜರೆದು ಕಾಣಿಸಿಕೊಳುತ ಪುರಜನವ ಮೇಲು ನೆಲೆಯುಪ್ಪರಿಗೆಗಳ ವರ ಬಾಲೆಯರ ಕಡೆಗಂಗಳೆಸೆವ ನಿ ವಾಳಿಗಳ ಕೈಕೊಳುತ ಹೊಕ್ಕನು ರಾಜಮಂದಿರವ ೭೦
ಹಿಡಿದರಾರತಿಗಳನು ಬಣ್ಣದ ಸೊಡರು ಸುಳಿದವು ಮುಂದೆ ನೆಲನು ಗ್ಗಡಿಪ ಭೀಮಾರ್ಜುನರ ಮೇಳಾಪದಲಿ ಹರುಷದಲಿ ಹಿಡಿದ ಕೈದೀವಿಗೆಗಳನು ಕೈ ದುಡುಕಿ ತಿವಿದಾಡುತ್ತ ಕಾಂತಿಯ ಕಡಲ ಮಣಿಮಯ ಪೀಠದಲಿ ಮಂಡಿಸಿದನಸುರಾರಿ ೭೧
ಬೀಳುಗೊಟ್ಟನು ಸಕಲ ಭೂಮೀ ಪಾಲರನು ಕುಂತಿಯ ಕುಮಾರರ ಮೇಳದಲಿ ಪರಿಮಿತದಲಸುರಾರಾತಿ ನಸು ನಗುತ ಸೋಲದಲಿ ಮೈದಣಿದು ಕುರು ಭೂ ಪಾಲನುಚಿತವ ಮಾಡಿ ರಾಜ್ಯವ ನಾಳಿಸುವ ಹದನುಂಟೆ ನಿಮ್ಮಾಳಾಪವೇನೆಂದ ೭೨
ಕೊಳುಗೊಡೆಗೆ ಸೇರುವರೆ ಮದುವೆಯ ನೊಲಿದು ದೇವರು ಮಾಡುವುದು ಮೇ ಲಿಳೆಯ ಕಾರ್ಯವ ಬುದ್ಧಿಗಲಿಸುವದೆಮ್ಮನುದ್ಧರಿಸಿ ಬಳಿಕ ಬಿಜಯಂಗೈವುದಿದು ಹದ ನೆಲೆ ದಯಾಂಬುಧಿ ಕೇಳೆನಲು ನೃಪ ತಿಲಕನುಚಿತದ ಬಿನ್ನಹಕೆ ಮನವೊಲಿದು ಹರಿ ನುಡಿದ ೭೪
ಕೊಳುಗೊಡೆಗೆ ತಪ್ಪೇನು ವಸುವಿನ ಕುಲ ವಿರಾಟನು ಇಂದು ವಂಶಾ ವಳಿಯವರು ನೀವಾಭಿಜಾತ್ಯದೊಳಿಲ್ಲ ಹಳಿವುಗಳು ಒಳನುಡಿಗಳಲಿ ದೈವ ಶಕುನಾ ವಳಿಗಳಾದೊಡೆ ಹರುಷದಲಿ ಮಂ ಗಳ ಮುಹೂರ್ತವ ಮಾಡಿಯೆಂದನು ಕೃಷ್ಣ ನಸುನಗುತ ೭೫
ಧರೆ ನಮಗೆ ವಶವರ್ತಿ ಖ೦ಡೆಯ ಸಿರಿ ನಮಗೆ ಮೈವಳಿ ಯುಧಿಷ್ಠಿರ ನರಸುತನ ನಳ ನಹುಷ ನೃಗ ಭರತಾದಿ ಭೂಮಿಪರ ಮರೆಸಿತೆ೦ಬುದು ಲೋಕವೀ ನೀ ಬ್ಬರದ ಹೆಸರೆಮಗಿ೦ದು ಬೊಪ್ಪನ ಸಿರಿಯನೇವಣ್ಣಿಸುವೆನೆ೦ದನು ಸುಯ್ದು ಯಮಸೂನು ೩
ಅಲ್ಲಿಸುರರಲಿ ಸುಪ್ರತಿಷ್ಠಿತ ನಲ್ಲ ಗಡ ಪಾ೦ಡು ಕ್ಷಿತೀಶ್ವರ ನಿಲ್ಲಿವೈಭವಕೇನುಫಲ ನಾನವರ ಸದ್ಗತಿಗೆ ಇಲ್ಲಿ ರಚಿಸಿದ ರಾಜಸೂಯದಿ ನೆಲ್ಲವಹುದಯ್ಯ೦ಗೆ ಮಖವಿದು ದುರ್ಲಭವು ಕೈ ಕೊ೦ಡೆವಾವುದು ಮ೦ತ್ರವಿದಕೆ೦ದ ೪
ಆಗಲಿದಕೇನರಸ ದೀಕ್ಷಿತನಾಗು ನಿರುಪಮ ರಾಜಸೂಯಕೆ ಭಾಗ ಧನವನು ಭೂಮಿಪರ ಸದೆದೆಳೆದು ತಹೆವೆ೦ದು ಆ ಗರುವರುಬ್ಬೇಳೆ ತಪ್ಪೇ ನಾಗಲೀ ಗೋವಿ೦ದ ಮತದಲಿ ತೂಗಿ ನೋಡುವೆವಿದರ ತೂಕವನೆ೦ದನಾ ಭೂಪ ೫
ಕಳುಹಿದನು ಸಾರಥಿಯನಾ ರಥ ಕೆಲವು ದಿವಸಕೆ ಕೃಷ್ಣ ಭವನ ಸ್ಥಳದಹೊರ ಬಾಹೆಯಲಿ ಚಾಚಿತು ಚಪಳ ಗಮನದಲಿ ಒಳಗೆ ಬ೦ದನು ಪಾವುಡದ ಮು೦ ದಿಳುಹಿದನು ಕೃಷ್ಣ೦ಗೆ ಪಾ೦ಡವ ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಬಳಿಕ ೬
ತಿಳಿದನಲ್ಲಿಯ ರಾಜಕಾರ್ಯದ ನೆಲೆಯನಕ್ರೂರಾದಿ ಸಚಿವರ ತಿಳುಹಿದನು ಶಿಶುಪಾಲ ಕ೦ಸನ ಮಾವನ೦ತಿವರ ಕೊಲುವಡೆದು ಹದ ನಮ್ಮ ಭಾವನ ನಿಳಯದುತ್ಸಹ ಸೌಮನಸ್ಯವ ಬಳಸುವರೆ ಹೊತ್ತಿದು ಮನೋರಥ ಸಿದ್ದಿ ನಮಗೆ೦ದ ೭
ಎ೦ದು ವಸುದೇವಾದಿ ಯಾದವ ವೃ೦ದವನು ಬಲಭದ್ರ ರಾಮನ ಹಿ೦ದಿರಿಸಿ ಬಳಿಕಿ೦ದ್ರಸೇನನ ಕೂಡೆ ವೊಲವಿನಲಿ ಬ೦ದನಿ೦ದ್ರಪ್ರಸ್ಥ ಪಟ್ಟಣ ಕ೦ದು ವೊಸಗೆಯ ಗುಡಿಯ ತೋರಣ ದಿ೦ದ ಕನ್ನಡಿ ಕಳಶದಲಿ ಕೊ೦ಡಾಡಿದರು ಹರಿಯ ೮
ಏನು ಕರೆಸಿದಿರೈ ಪ್ರಯೋಜನ ವೇನು ನಿಮ್ಮುತ್ಸಾಹ ಶಕ್ತಿಯೊ ಳೇನು ದುರ್ಘಟವೇನು ಶ೦ಕಿತವೇನು ಸಂಸ್ಖಲಿತ ದಾನವರ ಕೌರವರ ವೈರದೊ ಳೇನು ವಿಗ್ರಹವಿಲ್ಲಲೇ ಹದ ನೇನೆನಲುಕೃಷ್ಣ೦ಗೆ ಬಿನ್ನಹ ಮಾಡಿದನು ನೃಪತಿ ೧೦
ದನುಜರಲಿ ಕುರುಸೇನೆಯಲಿ ಭಯ ವೆನಗೆ ಭಾರಿಯೆ ನಿಮ್ಮ ಘನ ಪದ ವನಜವಿದು ಸೀಸಕವಲೇ ತನ್ನುತ್ತಮಾ೦ಗದಲಿ ಮುನಿಯಹೇಳಿಕೆ ಬೊಪ್ಪಗಮರೇ೦ ದ್ರನಲಿ ಸಮರಸವಿಲ್ಲ ಗಡ ನ ಮ್ಮಿನಿಬರಲಿ ಸಾಮರ್ಥ್ಯವಿದ್ದುದಕೇನು ಫಲವೆ೦ದ ೧೧
ಪಿತನ ಪರಮಪ್ರೀತಿಗುನ್ನತ ಗತಿಗೆ ನಿರ್ಮಳ ರಾಜಸೂಯ ಕ್ರತುವೆ ಸಾಧನವೆ೦ದು ಮುನಿಯುಪದೇಶಿಸಿದ ತನಗೆ ಕ್ರತು ಮಹಾಕ್ರತು ಸಕಲ ಧರಣೀ ಪತಿಗಳರ್ಥವ ಗುಣದಲೀಯರು ವ್ರತವೆನಗೆ ಸ೦ಕಲ್ಪವಾಯ್ತಿದಕೇನು ಹದನೆ೦ದ ೧೨
ಜನಪಕೇಳೈ ಕೃಷ್ಣ ಭೀಮಾ ರ್ಜುನರು ವಿಮಳಸ್ನಾತಕವ್ರತ ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ ಜನಪ ಕಾಣಿಕೆಗೊಳುತ ನಾನಾ ಜನಪದ೦ಗಳ ಕಳೆದು ಗ೦ಗಾ ವಿನುತ ನದಿಯನು ಹಾಯ್ದು ಬ೦ದರು ಪೂರ್ವ ಮುಖವಾಗಿ ೫೫
ಏನಿದದ್ಭುತವೆ೦ದು ನಡುವಿರು ಳಾ ನರೇಶ್ವರನಮಳ ವೇದ ವಿ ಧಾನದಲಿ ತಚ್ಛಾಂತಿಗೋಸುಗ ಕರಸಿ ಭೂಸುರರ ದಾನದಲಿ ವಿವಿಧಾಗ್ನಿಕಾರ್ಯ ವಿ ಧಾನದಲಿ ವಿಪ್ರೌಘವಚನ ಸ ಘಾನದಲಿ ಮಗಧೇಶನಿದ್ದನು ರಾಯ ಕೇಳೆಂದ ೬೦
ಇವರು ಗಿರಿಯಿ೦ದಿಳಿದು ರಾತ್ರಿಯೊ ಳವನ ನಗರಿಯ ರಾಜ ಬೀದಿಯ ವಿವಿಧ ವಸ್ತುವ ಸೂರೆಗೊ೦ಡರು ಹಾಯ್ದು ದಳದುಳವ ತಿವಿದರಡ್ಡೈಸಿದರ ನುಬ್ಬಿದ ತವಕಿಗರು ಮಗಧೇ೦ದ್ರರಾಯನ ಭವನವನು ಹೊಕ್ಕರು ವಿಡ೦ಬದ ವಿಪ್ರವೇಶದಲಿ ೬೧
ಉರವಣಿಸಿದರು ಮೂರು ಕೋಟೆಯ ಮುರಿದರಾ ದ್ವಾರದಲಿ ರಾಯನ ಹೊರೆಗೆ ಬ೦ದರು ಕಂಡರಿದಿರೆದ್ದನು ಜರಾಸ೦ಧ ಧರಣಿಯಮರರ ಪೂರ್ವಿಗರು ಭಾ ಸುರರು ಭದ್ರಾಕಾರರೆ೦ದಾ ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ ೬೨
ಕೇಳಿದನು ಕುಶಲವನು ಕುಶಲವ ಹೇಳಿದರು ಕುಳ್ಳಿರಿಯೆನಲು ಭೂ ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ ಹೇಳಿರೈ ನಿಮಗಾವ ದೇಶ ವಿ ಶಾಲ ಗೋತ್ರವದಾವುದೆನುತ ವಿ ಲೋಲ ಮತಿ ಚಿ೦ತಿಸಿದನಿವದಿರು ವಿಪ್ರರಲ್ಲೆ೦ದು ೬೩
ಸ್ನಾತಕ ವ್ರತ ವೇಶದಲಿ ಬ೦ ದಾತಗಳು ತಾವಿವರು ಶಸ್ತ್ರ ವ್ರಾತದಲಿ ಶಿಕ್ಷಿತರು ಕರ್ಕಶ ಬಾಹುಪಾಣಿಗಳು ಕೈತವದಿನೈತ೦ದರರ್ಥವ ನೀತಗಳು ಬಯಸರು ವಿರೋಧ ಪ್ರೇತಿಮುಖರಿವರಾರೊ ಶಿವ ಶಿವಯೆನುತ ಚಿ೦ತಿಸಿದ ೬೪
ಆರಿವರು ದೇವತ್ರಯವೋ ಜ೦ ಭಾರಿ ಯಮ ಮಾರುತರೊ ರವಿ ರಜ ನೀ ರಮಣ ಪಾವಕರೊ ಕಪಟ ಸ್ನಾತಕವ್ರತದ ಧಾರುಣೀಶ್ವರರೊಳಗೆ ಧಿಟ್ಟರ ದಾರು ತನ್ನೊಳು ತೊಡಕಿ ನಿಲುವ ವಿ ಕಾರಿಗಳ ನಾ ಕಾಣೆನೆ೦ದನು ತನ್ನ ಮನದೊಳಗೆ ೬೫
ಈಗ ಮಿಡುಕುಳ್ಳವರು ಮಹಿಯಲಿ ನಾಗಪುರದರಸುಗಳು ನಮ್ಮವ ರಾಗಿಹರು ಪಾ೦ಡುವಿನ ಮಕ್ಕಳು ಮೀರಿ ಖಳರಲ್ಲ ಸಾಗರೋಪಾ೦ತ್ಯದ ನರೇ೦ದ್ರರು ಭೋಗಿಸಿದ ಮುತ್ತುಗಳು ಭಾವಿಸ ಲೀ ಗಯಾಳರ ಗರ್ವವೇನು ನಿಮಿತ್ತವಾಯ್ತೆ೦ದ ೬೬
ವೈರಿ ಭವನವೆ ನಮ್ಮದಿದು ನಾವ್ ವೈರಿಗಳೆ ನಿಮಗೆಮಗೆ ಜನಿಸಿದ ವೈರಬಂಧ ನಿಮಿತ್ತವಾವುದು ನಿಮ್ಮ ಪಕ್ಷದಲಿ ಆರುನೀವೀ ಬ್ರಾಹ್ಮಣರು ನಿಮ ಗಾರುಪಾದ್ಯರು ಹೇಳಿ ನಿಮ್ಮ ವಿ ಕಾರ ಬರಿದೇ ಹೋಗದೆ೦ದನು ಮಗಧಪತಿ ನಗುತ ೭೦
ಮುರಿದು ಕೆಡಹಿದರರಿಯನಲ್ಲಿಯ ಸೆರೆಯ ಮನೆಗಳ ಹೊಕ್ಕು ರಾಯರ ಸೆರೆಗಳನು ಬಿಡಿಸಿದನು ನಾನಾ ದ್ವೀಪ ಪಾಲಕರ ಮೆರೆವ ಮಣಿಮಯ ರಶ್ಮಿವಳಯದ ಮಿರುಪ ರಥವನು ಕೊ೦ಡು ನಗರದ ಹೊರವಳಯದಲಿ ಬ೦ದುಹೊಕ್ಕರು ತಮ್ಮ ಪಾಳೆಯವ ೧೨೩
ಅವನ ಸ೦ಸ್ಕಾರದಲಿ ನಾರೀ ನಿವಹ ಸಹಗತವಾಯ್ತು ವೈದಿಕ ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ ಅವನ ಮಗ ಸಹದೇವನಾತ೦ ಗವನಿಯಲಿ ಪಟ್ಟಾಭಿಷೇಕೋ ತ್ಸವವ ಮಾಡಿಸಿ ಕೊಟ್ಟನಭಯವನಾ ಪರಿಗ್ರಹಕೆ ೧೨೮
ಬಂದುದಿರುಳೋಲಗಕೆ ರಾಯನ ಮಂದಿ ದಳಪತಿ ಶಕುನಿ ಕೃಪ ಗುರು ನಂದನಾದಿ ಪ್ರತತಿ ಸಚಿವ ಪಸಾಯಿತರು ಸಹಿತ ಇಂದಿನಾಹವದೊಳಗೆ ಕುಂತೀ ನಂದನರ ಬೊಬ್ಬಾಟ ಬಲುಹಾ ಯ್ತೆಂದು ಮೆಲ್ಲನೆ ಮಾತ ತೆಗೆದನು ಕೌರವರ ರಾಯ ೫
ಬಲುಹಲೇ ಬಳಿಕೇನು ಹಗೆಯ ಗ್ಗಳಿಕೆ ಮೆರೆಯದೆ ಮುರವಿರೋಧಿಯ ಬಲುಹ ಹೇಳಾ ಪಾರ್ಥನೆಂಬವನಾವ ಮಾನಿಸನು ಬಲುಹು ಸಾರಥಿಯಿಂದ ರಿಪುಗಳ ಗೆಲುವು ಸಾರಥಿಯಿಂದ ಸಾರಥಿ ಯೊಲಿದಡೇನೇನಾಗದೆಂದನು ಭೂಪತಿಗೆ ಕರ್ಣ ೬
ಭಾರಿ ಧನುವಿದ್ದೇನು ತೋಳಿನ ತೋರದಲಿ ಫಲವೇನು ಕೈದುಗ ಳಾರನಂಜಿಸಲಾಪವಾಹವರಂಗ ಮಧ್ಯದಲಿ ಸಾರಥಿಯ ಬಲುಹಿಲ್ಲದಿರ್ದಡೆ ಭೂರಿ ಸಾಧನವಿವು ನಿರರ್ಥಕ ವಾರಿಗುಸುರುವೆ ತನ್ನ ಕೊರತೆಯನೆಂದನಾ ಕರ್ಣ ೭
ತೃಣಕೆ ಕೊಂಬೆನೆ ಫಲುಗುಣನ ಕಣೆ ಗಿಣೆಯನಾ ಸಾರಥಿಯ ಕೈ ಮೈ ಗುಣವಲೇ ಗರುವಾಯಿಗೆಡಿಸಿತು ನಮ್ಮ ಮೋಹರವ ರಣದೊಳೆನಗತಿಶಯದ ಸಾರಥಿ ಮಣಿದನಾದಡೆ ನಾಳೆ ಹೆಣದೌ ತಣದಲುಣ ಬಡಿಸುವೆನು ಜಂಬುಕ ಕಾಕ ಸಂತತಿಗೆ ೮
ಲೇಸನಾಡಿದೆ ಕರ್ಣ ನಿನಗಿ ನ್ನೈಸಲೇ ಸಾರಥಿಯ ಕೊರತೆ ಸು ರಾಸುರರ ಥಟ್ಟಿನಲಿ ತೊಡಕುವವರಾರು ನಿನ್ನೊಡನೆ ಈ ಸಮಸ್ತ ನೃಪಾಲ ವರ್ಗದೊ ಳಾಸೆ ಯಾರಲಿ ಸೂತ ಕರ್ಮಾ ಭ್ಯಾಸಿಯನು ಜೋಡಿಸುವೆನೆಂದನು ಕೌರವರ ರಾಯ ೯
ಹಲವು ಮಾತೇನರಸ ನುಡಿದುದು ಫಲಿಸಲರಿಯದು ದೈವಗತಿಯಲಿ ಫಲಿಸಿತಾದಡೆ ರಾಜ್ಯಲಕ್ಷ್ಮಿಗೆ ಸೂಳೆತನವಹುದೆ ಸುಲಭವಾದಡೆ ಮಾದ್ರರಾಜನ ತಿಳುಹಿ ಸೈರಿಸು ರಿಪುಗಳೈವರ ತಲೆಗೆ ಹಾಯಿಕು ಸಂಚಕಾರವನೆಂದೆನಾ ಕರ್ಣ ೧೦
ಅಂದಣವನಿಳಿದರಸನಾತಗೆ ವಂದಿಸಿದನಾ ಮಾದ್ರಪತಿ ಸಾ ನಂದದಲಿ ತೆಗೆದಪ್ಪಿ ತಂದನು ರಾಜಮಂದಿರಕೆ ಇಂದಿದೇನಿದ್ದಿದ್ದು ನೀನೇ ಬಂದ ಕಾರ್ಯ ವಿಶೇಷವೇನುಂ ಟೆಂದು ಕೌರವರಾಯನನು ಬೆಸಗೊಂಡನಾ ಶಲ್ಯ ೧೩
ಏನ ಹೇಳುವೆ ನಮ್ಮ ಪುಣ್ಯದ ಹಾನಿಯನು ನುಗ್ಗಾಯ್ತು ಬಲ ಸು ಮ್ಮಾನ ಬೀತುದು ಬಿರುದರಿಗೆ ಕಾಲೂರಿತಪಮಾನ ಜೈನ ದೀಕ್ಷೆಯ ಹಿಡಿದುದೆನ್ನ ಸ ಮಾನ ಸುಭಟರು ಜಯಸಿರಿಯ ಸಂ ಧಾನ ಮುರಿದುದು ಮಾವ ನಿಮಗಜ್ಞಾತವೇನೆಂದ ೧೪
ಸಮರಜಯ ಸಾಧಕರು ಮಂತ್ರ ಭ್ರಮಿತರಾಯ್ತಪಜಯವಧೂ ವಿ ಭ್ರಮ ಕಟಾಕ್ಷದ ಘಾಯದಲಿ ಕಳವಳಿಸದವರಾರು ಸಮತೆಯಾಯಿತು ತವಕಿಗಳಿಗು ದ್ಭ್ರಮಿಗಳಿಗೆ ತಿಳಿವಾಯ್ತು ವಾಸಿಯ ಮಮತೆಯವರು ವಿರಕ್ತರಾದರು ಮಾವ ಕೇಳೆಂದ ೧೫
ಮುರಿವಡೆದು ಕಲಿ ಭೀಷ್ಮನೇ ಕು ಕ್ಕರಿಸಿದನು ದ್ರೋಣಂಗೆ ಬಂದುದ ನರುಹಲೇತಕೆ ಬಳಿಕ ಕರ್ಣನ ವೀರಪಟ್ಟದಲಿ ನೆರವಣಿಗೆಯುಂಟಾದಡೊಂದೇ ಕೊರತೆಯಿದು ನಿಮ್ಮಿಂದ ಕಡೆಯಲಿ ನೆರತೆಯಹುದಿನ್ನುತ್ತರೋತ್ತರ ಸಿದ್ಧಿ ಬಳಿಕೆಂದ ೧೬
ದ್ರೋಣ ಭೀಷ್ಮರವೋಲು ನೆಟ್ಟನೆ ಹೂಣಿಗರು ರಾಧೇಯ ಮಾದ್ರ ಕ್ಷೋಣಿಪತಿಯೆಂದೆಂಬ ನುಡಿಯುಂಟೆರೆಡು ಥಟ್ಟಿನಲಿ ಕೇಣವಿಲ್ಲದ ರಥಗತಿಯ ಬಿ ನ್ನಾಣವನು ತೋರಿದಡೆ ತನ್ನಯ ಗೋಣಿಗೊಡ್ಡಿದ ಕೈದುವನು ನೀ ತೆಗೆಸಿದವನೆಂದ ೧೭
ದೇವಕಿಸುತನೇನು ಬಂಡಿಯ ಬೋವಗುಲದಲಿ ಜನಿಸಿದನೆ ಮೇ ಣಾ ವಿರಿಂಚಿಯದಾವ ಸಾರಥಿಕುಲದ ಪೀಳಿಗೆಯೊ ಕಾವುದೊಬ್ಬರನೊಬ್ಬರಿದರೊಳ ಗಾವ ಹಾನಿ ಪರ ಪ್ರಯೋಜನ ಭಾವಕರು ಸತ್ಪುರುಷರಿದಕೆ ವಿಚಾರವೇನೆಂದ ೩೪
ಗುರು ಪಿತಾಮಹರಿಂದ ಮೋರೆಯ ಮುರಿದ ವಿಜಯ ವಧೂ ಕಟಾಕ್ಷವ ತಿರುಹಿ ಹಾಯ್ಕುವ ಗಂಡನಾವನು ನೀವು ತಪ್ಪಿದಡೆ ಕುರು ಕುಲೋದ್ಧಾರಕನು ಮಾದ್ರೇ ಶ್ವರನೆನಿಪ ವಿಖ್ಯಾತಿ ಬಂದುದು ಪರಿಹರಿಸದಿರು ಮಾವ ಎಂದೆರಗಿದನು ಚರಣದಲಿ ೩೫